TRAI NEW RULES : ಇನ್ನು ಮುಂದೆ 11 ಅಂಕಿಗಳ ಹೊಸ ಮೊಬೈಲ್ ನಂಬರ್

ದಿನೆ ದಿನೆ ಮೊಬೈಲ್ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) 11 ಅಂಕಿಗಳ ಹೊಸ ಮೊಬೈಲ್​ ಸಂಖ್ಯೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಭಾರತವು 2027 ರ ವೇಳೆಗೆ ಚೀನಾವನ್ನು ಮೀರಿಸುವ ಮೂಲಕ ಹೆಚ್ಚು ಜನಸಂಖ್ಯೆ ಹೊಂದಲಿರುವ ದೇಶವಾಗಲಿದೆ.

ಮೊಬೈಲ್ ಗ್ರಾಹಕರ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜತೆಗೆ ಹಲವರು ಒಂದಕ್ಕಿಂತ ಹೆಚ್ಚಿನ ಸಂಖ್ಯೆಗಳನ್ನು ಹೊಂದುತ್ತಿರುವುದರಿಂದ ಈ ನಿರ್ದಾರ ತಗೆದುಕೊಳ್ಳಲಾಗಿತ್ತಿದೆ.
2050 ರ ಸುಮಾರಿಗೆ ಭಾರತಕ್ಕೆ ಬರೊಬ್ಬರಿ 185 ಕೋಟಿ ಮೊಬೈಲ್ ಸಂಖ್ಯೆಗಳ ಅವಶ್ಯಕತೆ ಎದುರಾಗಲಿದೆ ಎಂದು ಟ್ರಾಯ್ ಅಭಿಪ್ರಾಯ ಪಟ್ಟಿದೆ.

ಇದುವರೆಗೆ ಭಾರತದಲ್ಲಿ 9, 8, 7 ಸಂಖ್ಯೆಗಳಿಂದ 10 ಅಂಕೆಗಳ ಮೊಬೈಲ್​ ನಂಬರ್​ಗಳನ್ನು ಬಳಸಿ 210 ಕೋಟಿ ಮೊಬೈಲ್​ ನಂಬರ್​ಗಳನ್ನು ವಿತರಿಸಲಾಗಿದೆ. ಗ್ರಾಹಕರ ಬೇಡಿಕೆಯ ಮೇರೆಗೆ ಈ ನಿರ್ದಾರ ಕೈಗೊಳ್ಳಲಾಗುತ್ತಿರುವುದಾಗಿ ಟ್ರಾಯ್ ಹೇಳಿಕೊಂಡಿದೆ.

Lingaraj Author

Leave a Reply

Your email address will not be published. Required fields are marked *