29 ನಕಲಿ ಆಯಪ್ ಪತ್ತೆ ಮಾಡಿದ ಕ್ವಿಕ್ ಹೀಲ್ ಸಂಸ್ಥೆ

ಅಂಡ್ರಾಯ್ಡ ಮೊಬೈಲ್ ಬಳಕೆದಾರರೆ ಎಚ್ಚರ. ಗೂಗಲ್ ಪ್ಲೇಸ್ಟೋರ್‍ನಲ್ಲಿ ಮತ್ತೆ ನಕಲಿ ಆಯಪ್‍ಗಳ ಹಾವಳಿ ಸುರುವಾಗಿದೆ. ಹೌದು ಒಟ್ಟು 29 ನಕಲಿ ಆಯಪ್‍ಗಳನ್ನ ಕ್ವಿಕ್ ಹೀಲ್ ಕಂಪನಿ ಕಂಡು ಹಿಡಿದಿದೆ. ಈ ಆಯಪ್ಗಳು 10 ದಶಲಕ್ಷಕ್ಕೂ ಹೆಚ್ಚು ಡೌನ್ಲೊಡ್ ಆಗಿದ್ದು. ಬಳಕೆದಾರರ ಮಾಹಿತಿಯನ್ನ ಕದಿಯುತ್ತಿವೆ.

ಈ 24 ನಕಲಿ ಆಯಪ್‍ಗಳು “ಹಿಡ್‍ಆಡ್” ಎಂಬ ವಿಭಾಗಕ್ಕೆ ಮತ್ತು 5 ಆಯಪ್‍ಗಳು ಅಡ್ವೇರ್ ವಿಭಾಗಕ್ಕೆ ಸೇರಿದ್ದು ಎಂದು ತಿಳಿದು ಬಂದಿದೆ. ಈ ಆಯಪ್ಗಳು ಗ್ರಾಹಕರ ಖಾಸಗಿ ಮಾಹಿತಿಯನ್ನ ಕದಿಯುತ್ತಿವೆ ಮತ್ತು ಈ ಆಯಪ್‍ಗಳು ನೀವು ಯ್ಯೂಟೂಬ್ & ಫೇಸ್‍ಬುಕ್ ಉಪಯೋಗಿಸುವಾಗ ಜಾಹಿರಾತುಗಳ ಮೂಲಕ ನಿಮಗೆ ತೊಂದರೆ ಕೊಡುವುದಲ್ಲದೆ, ಹಲವಾರು ಬಾರಿ ಜಾಹಿರಾತು ಪಾಪ್‍ಅಪ್‍ಗಳ ಮೂಲಕ ಹೆಚ್ಚು ಮೊಬೈಲ್ ಡಾಟಾ ಬಳಸಿಕೊಳ್ಳುತ್ತವೆ & ಮೊಬೈಲ್ ಬ್ಯಾಟರಿ ಸಾಮಥ್ರ್ಯವನ್ನು ಕಡಿಮೆ ಮಾಡುತ್ತವೆ.

ಈ ಮಾಹಿತಿ ಗೂಗಲ್‍ಗೆ ತಿಳಿಯುತ್ತಿದ್ದಂತೆ ಈ 29 ಆಯಪ್‍ಗಳನ್ನು ಪ್ಲೇಸ್ಟೋರ್‍ನಿಂದ ತೆಗೆದು ಹಾಕಲಾಹಿದೆ.

Lingaraj Author

Leave a Reply

Your email address will not be published. Required fields are marked *