ಇನ್ನೆನು 2 ದಿನದಲ್ಲಿ “ರೆಡ್ಮಿ 8ಎ”ಬಿಡುಗಡೆ!..ಬೆಲೆ ಎಷ್ಟು ಗೊತ್ತಾ?

ಭಾರತದ ಜನಪ್ರಿಯ ಮೊಬೈಲ್ ಕಂಪನಿಯಾದ ಶಿಯೊಮಿ ರೆಡ್ಮಿ ಇದೇ ಸೆಪ್ಟೆಂಬರ್ 25 ರಂದು ಭಾರತದಲ್ಲಿ ಶಿಯೋಮಿ ರೆಡ್‌ಮಿ 8ಎ ಸ್ಮಾರ್ಟ್‌ಫೋನ್ ಬಿಡುಗಡೆಯಾಗುವುದು ಎಂದು ಖಚಿತಪಡಿಸಲಾಗಿದೆ. ಈ ಮೊಬೈಲ್ ಪ್ಲಿಪ್ ಕಾರ್ಟ ನಲ್ಲಿ ದೊರೆಯಲಿದ್ದು.
ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಹೆಚ್‌ಡಿ + ಡಿಸ್‌ಪ್ಲೇ ಹಾಗೂ ವೇಗವಾಗಿ ಚಾರ್ಜಿಂಗ್ ಬ್ಯಾಟರಿ ಹೊಂದಿದ್ದು ಅದ್ದೂರಿಯಾಗಿ ಮಾರುಕಟ್ಟೆಗೆ ಬರುತ್ತಿದೆ. ವಾಟರ್‌ಡ್ರಾಪ್-ಶೈಲಿಯ ಡಿಸ್ಪ್ಲೇ ನೋಚ್ ಹೊಂದಿರುವ

ಮ್ಯಾಟ್ ಬ್ಲೂ ಮತ್ತು ಬ್ಲಾಕ್‍ನ ಎರಡು ಕಲರ್‍ನಲ್ಲಿ ರೆಡ್ಮಿ 8ಎ ಸ್ಮಾರ್ಟ್‍ಪೋನ್ ದೊರೆಯಲಿದ್ದು. 2ಜಿಬಿ & 16ಜಿಬಿ ಮಾದರಿಗೆ ರೂ. 6,499 ಮತ್ತು 3ಜಿಬಿ & 32ಜಿಬಿ ಮಾದರಿಗೆ ರೂ. 6,999 ಹಾಗೂ 4ಜಿಬಿ & 64ಜಿಬಿ ಮಾದರಿಗೆ ರೂ 8,999 ಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಬಜೆಟ್ ಬೆಲೆಯ ಈ ಸ್ಮಾರ್ಟ್‌ಫೋನ್ 5,000 ಎಂಎಹೆಚ್ ಬ್ಯಾಟರಿ ಹೊಂದಿದೆ. ಈ ಫೋನ್‌ನಲ್ಲಿ 12 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಇರುತ್ತದೆ ಎಂದು ಹೇಳಲಾಗಿದೆ.

Lingaraj Author

Leave a Reply

Your email address will not be published. Required fields are marked *